ಹಿಮಟೈಟ್
		ಬಲು ಭಾರ ಮತ್ತು ಕಠಿಣವಾದ ಫೆರ್ರಿಕ್ ಆಕ್ಸೈಡಿನ ರ್ಹೋಂಬೋಹಿಡ್ರಲ್ ಸ್ಫಟಿಕರೂಪೀ ಖನಿಜ. ಅಧಿಕ ಲಭ್ಯ ಕಬ್ಬಿಣದ ಅದುರು (sಸು. 70% ಕಬ್ಬಿಣಾಂಶ). ಅನೇಕ ಬಗೆಯ ಹೀಮಟೈಟುಗಳಿವೆ. ಸ್ಪೆಕ್ಯುಲರ್ ಕಬ್ಬಿಣ ಅದುರು: ಉಜ್ಜ್ವಲ ಲೋಹೀಯ ಹೊಳಪಿನ ಉಕ್ಕು-ಬೂದು ಬಣ್ಣದ ಸ್ಫಟಿಕೀಯ ಮತ್ತು ತರಿತರಿ ಮೇಲ್ಮೈಯ ಬಗೆಗಳು. ಮೈಕಾಸೀಯಸ್ ಹೀಮಟೈಟ್: ತೆಳು ಶಲ್ಕೀ ರೂಪ. ಅಯಸ್ಸಿಂಧೂರ ಅಥವಾ ಕೆಂಪು ಕಾವಿ ಮಣ್ಣು (ಕೆಂಗಾವಿ, ರಡಲ್, ಓಕರ್): ಸೂಕ್ಷ್ಮರವೆಯಂಥ ಮಿದು ಮಣ್ಣಿನ ರೂಪ. ಕೊನೆಯದಕ್ಕೆ ವರ್ಣದ್ರವ್ಯವಾಗಿಯೂ ಗಾಜು ಹಾಗೂ ಬೆಳ್ಳಿಗೆ ಹೊಳಪುಕೊಡುವ ರೂಷ್ ಆಗಿಯೂ ಬಳಕೆಯುಂಟು. ಮೂತ್ರಪಿಂಡ ಅದುರು, ಪೆನ್ಸಿಲ್ ಅದುರು ಎಂಬ ಮಧ್ಯಂತರ ಬಗೆಗಳೂ ಉಂಟು. ಅದುರುಗಳ ಕಾಠಿಣ್ಯಾಂಕ 5.5 -6.5, ಸಾಪೇಕ್ಷ ಸಾಂದ್ರತೆ 4.2-5.25. 

	ಹೀಮಟೈಟಿನ ಪ್ರಮುಖ ನಿಕ್ಷೇಪಗಳಿರುವುದು ಜಲಜ ಶಿಲೆಗಳಲ್ಲಿ. ಮಿಶಿಗನ್‍ನ ಸುಪೀರಿಯರ್ ಸರೋವರ ತೀರದಲ್ಲಿ, ಬ್ರೆಜಿóಲ್‍ನಲ್ಲಿ ಪ್ರಪಂಚದ ಅತಿ ದೊಡ್ಡ ನಿಕ್ಷೇಪಗಳಿವೆ. ವೆನಿಜುವೆಲ, ಲ್ಯಾಬ್ರಡಾರ್, ಕ್ವಿಬೆಕ್‍ಗಳಲ್ಲಿಯೂ ಗಣನೀಯ ಪ್ರಮಾಣದ ನಿಕ್ಷೇಪಗಳವೆ. ಭಾರತದಲ್ಲಿ ಸಾಪೇಕ್ಷವಾಗಿ ಅಲ್ಪ ಪ್ರಮಾಣದಲ್ಲಿ ಲಭ್ಯ.					
	(ಕೆ.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ